ಅಭಿಪ್ರಾಯ / ಸಲಹೆಗಳು

ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ

ಕೇಂದ್ರ ಇಂಧನ ಮಂತ್ರಾಲಯ, ಭಾರತ ಸರ್ಕಾರ ತಮ್ಮ ಕಛೇರಿ ಜ್ಞಾಪನಾ ಪತ್ರ ಸಂಖ್ಯೆ: 44/44/2014-RE ದಿನಾಂಕ: 03.12.2014ರಲ್ಲಿ ದೀನದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗೆ ಮಂಜೂರಾತಿಯನ್ನು ನೀಡಿರುತ್ತಾರೆ. ಈ ಯೋಜನೆಯ ಪ್ರಮುಖ ಉದ್ದೇಶವು ಈ ಕೆಳಕಂಡಂತಿದೆ.

ಅ) ಗ್ರಾಮೀಣ ಭಾಗದ ಕೃಷಿ ಮತ್ತುಕೃಷಿಯೇತರ ಗ್ರಾಹಕರಿಗೆ ನ್ಯಾಯಯುತ ಸರದಿ ಪಟ್ಟಿ ಅನ್ವಯ ವಿದ್ಯುತ್ ಪೂರೈಕೆ ಮಾಡಲು ಅನುವಾಗುವಂತೆ ಕೃಷಿ ಮತ್ತು ಕೃಷಿಯೇತರ ಮಾರ್ಗಗಳ ವಿಭಜನೆ.

ಆ) ವಿದ್ಯುತ್ ಪರಿವರ್ತಕಗಳು/ಮಾರ್ಗಗಳು/ಗ್ರಾಹಕರ ಸ್ಥಾವರಗಳ ಮಾಪಕ ಸೇರಿದಂತೆ, ಗ್ರಾಮೀಣ ಭಾಗದಲ್ಲಿನ ಉಪ ಪ್ರಸರಣ ಹಾಗೂ ವಿತರಣಾ ಮೂಲ ಸೌಕರ್ಯದ ವೃದ್ಧಿ ಹಾಗೂ ಬಲವರ್ಧನೆ. 

ಇ)ಗ್ರಾಮೀಣ ವಿದ್ಯುದೀಕರಣ: ದಿನಾಂಕ 01.08.2013ರಲ್ಲಿ CCEA ರವರು ಅನುಮೋದಿಸಿರುವಂತೆ ಆರ್.ಜಿ.ಜಿ.ವಿ.ವೈ 12ನೇ ಹಾಗೂ 13ನೇ ಯೋಜನೆಯಡಿಯಲ್ಲಿ ನಿಗದಿಪಡಿಸಲಾದಗುರಿಯನ್ನು ಪೂರ್ಣಗೊಳಿಸಲು, ಆರ್.ಜಿ.ಜಿ.ವಿ.ವೈಯೋಜನೆಗೆ ಮಂಜೂರಾದ ಮೊತ್ತವನ್ನು ಡಿ.ಡಿ.ಯು.ಜಿ.ಜೆ.ವೈ ಯೋಜನೆಗೆ ತರುವ ಮೂಲಕ.

ಕೇಂದ್ರ ಇಂಧನ ಮಂತ್ರಾಲಯದ ಮಾನಿಟರಿಂಗ್ ಸಮಿತಿಯು ಕರ್ನಾಟಕ ರಾಜ್ಯಕ್ಕೆ ಡಿ.ಡಿ.ಯು.ಜಿ.ಜೆ.ವೈ. ಯೋಜನೆಯಡಿ ಒಟ್ಟು ರೂ.1754.52 ಕೋಟಿ ಮೊತ್ತಕ್ಕೆ ಅನುಮೋದನೆ ನೀಡಿದೆ. ವಿದ್ಯುತ್ ಸರಬರಾಜು ಕಂಪನಿವಾರು ವಿವರ ಕೆಳಕಂಡಂತಿದೆ:

 

ಕ್ರ.ಸಂ

ಕಂಪನಿ

ಅನುಮೋದಿತ ಮೊತ್ತ (ರೂ. ಕೋಟಿಗಳಲ್ಲಿ)

1

ಬೆಸ್ಕಾಂ

235.33

2

ಸೆಸ್ಕ್

278.84

3

ಮೆಸ್ಕಾಂ

395.67

4

ಹೆಸ್ಕಾಂ

332.12

5

ಜೆಸ್ಕಾಂ

496.83

6

ಹುಕ್ಕೇರಿ

7.00

ಒಟ್ಟು

1745.79

ಪಿ.ಎಂ. ವೆಚ್ಚ @ 0.5%

8.73

ಒಟ್ಟು ಯೋಜನಾ ಮೊತ್ತ

1754.52

ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಈ ಜಾಲತಾಣವನ್ನು ಸಂಪರ್ಕಿಸಿ: ಡಿ.ಡಿ.ಯು.ಜಿ.ಜೆ.ವೈ

ಇತ್ತೀಚಿನ ನವೀಕರಣ​ : 13-02-2020 04:14 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಇಂಧನ ಇಲಾಖೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ